ತಿಟ್ಟ ಮರುಕೆ : wallpapers.net
ನನ್ನ ಮನದಾಳದಲ್ಲಿ ಬರುವ ಹಳೆ/ಹೊಸ ವಿಶಯಗಳನ್ನು ಬರೆದು ಕಾಪಿಡಬೇಕು ಎನ್ನುವ ಆಸೆ ಬಂದಾಗಲೆ, ನನ್ನ ಈ ಬ್ಲಾಗ್ ಶುರುಮಾಡಿದೆ. ಇದನ್ನು ಮೊದಲು ಆಂಡ್ರಾಯಿಡ್ ಗೆ ಮೀಸಲಿಟ್ಟಿದ್ದೆ. ಆದರೆ ಆಂಡ್ರಾಯಿಡ ಬಗ್ಗೆ ಬರೆಯಲು, ಸಮಯ ಒದಗುತ್ತಿಲ್ಲ.. ಅದರಲ್ಲು ಈಗ ನಾನು wpf ಮೇಲೆ ಕೆಲಸ ಸುರು ಮಾಡಿದಮೇಲೆ ಆಂಡ್ರಾಯಿಡ ಬಗ್ಗೆ ಬರೆಯುವ ಉತ್ಸಾಹ ತಾತ್ಕಾಲಿಕವಾಗಿ ತಡೆಯಲ್ಲಿದೆ. ಇರಲಿ ಅದಕ್ಕೊಂದು ಹೊಸ ಬ್ಲಾಗ್ ಶುರು ಮಾಡಿದರಾಯಿತು ಎಂದು ಬಿಟ್ಟಿದ್ದೇನೆ. ಗೆಳೆಯ ಪ್ರಿಯಾಂಕನು ನನಗೆ ಕನ್ನಡದೊಳ್ಪಿನ ಕೆಲಸಗಳಿಗೆ ಒಂದು ಬ್ಲಾಗನ್ನು ಶುರುಮಾಡಲು ಒತ್ತಾಯಪೂರ್ವಕವಾಗಿ ತಿಳಿಸಿದ್ದರಿಂದ, ಹಾಗು ನನ್ನಲ್ಲಿ ಮುಂಚೆಯಿಂದಲು ಇದ್ದ ಒಲವು, ಈ ನೀಲಿ ಬಾನನ್ನು ಅದಕ್ಕೆ ಬಳಸುವುದೆಂದು ಬಗೆದು, ಇಲ್ಲಿ ಬರೆಯಲೊರೆಯುತ್ತಿದ್ದೇನೆ...
ಇದಕ್ಕೆ ನೀಲಿ ಪುಟವೆಂದು ಕರೆದದ್ದು, ಸಹಜವಾಗೆ ಇದೆ. ನಡುಹಗಲಿನ ಆ ತಿಳಿನೀಲಿ ಬಣ್ಣ ನನ್ನ ಸೆಳೆದದ್ದು, ಅದರ ಬದಿಯಲ್ಲೆ ಕನಸುಗಳಿಗೆ ಎಲ್ಲೆಯಿಲ್ಲವೆನ್ನುವ ತಿಳಿವು ಮೂಡಿದ್ದು, ಆ ಸ್ವಚ್ಚಂದ ಆಗಸದಲ್ಲಿ... ನಲಿವಿನಿಂದ ಹಾರಾಡುವ ಬಾನಾಡಿಗಳು, ಅವುಗಳ ಕಲರವ, ಎಲ್ಲರನ್ನು ಮುಟ್ಟುವ ಬಾನಂಗಳದಲ್ಲಿ ನಡಿಯುವ ಚೆಂದದ ಆಟಗಳು, ವಿಸ್ಮಯಕಾರಿ ಜಗತ್ತೊಂದು ತೆರೆದುಕೊಳ್ಳುವ ಬಗೆ, ಅವು ಕೊಡುವ ಸಹಜ ನಿರೂಪಣೆ, ಇವೆಲ್ಲ ನನ್ನ ಬ್ಲಾಗಿಗೆ ಬರಲಿ ಎನ್ನುವ ಕುದಿವ ಬಯಕೆಯಿಂದಲೆ ಇದಕ್ಕೆ ನೀಲಿ ಬಾನೆಂದಿರುವೆ...
ಮುಂದಿನ ಬರಹಗಳಿಗೆ ಕಾದಿರಿ...
ನಿಮ್ಮವ
ಖವಿ.
